Thursday, June 5, 2008

ಮಳೆಗಾಲದ ಒಂದು ದಿನ

ನಾವೆಲ್ಲರೂ ಬರೆದ ಮೊದಲ ನಿಬಂಧ ಇದೇ ತಾನೆ. ಹೆದರಬೇಡಿ. ಈಗ ಅದನ್ನು ಓದಿಸುತ್ತಿಲ್ಲ.
Great, Blogger is having a language button (Just below html which says Hinda a. And it is letting me providing a list of kannada words when I backspace. Too good!!

ಅಮ್ಮನ ಜೊತೆ ಮಾತಾಡುತ್ತಿದ್ದೆ. ಬಿ ಎಸ್ ಎನ್ ಎಲ್ ಅವರದ್ದು ಒಂದು ಸ್ಕಿಂ ಇತ್ತು. ಮೊಬೈಲ್ ಇಂದ ಯಾವುದೇ ಎರಡು ನಂಬರ್ ಗೆ ಸ್ಪೆಷಲ್ ತಾರಿಫ್. ಎಷ್ಟು ಗೊತ್ತೆ? ೧೦ ಪೈಸೆ ನಿಮಿಷಕ್ಕೆ. ಅದನ್ನು ಅಮ್ಮನ ಮನೆಗೆ ಹಾಕಿಸಿಕೊಂಡಿದ್ದೆ. ಈಗೆ (ಸಾರೀ ದಿಸ್ ಎಡಿಟರ್ ಈಸ್ ಟೈಪಿಂಗ್ ಇಗೆ ಇನ್ಸ್ತೆದ್ ಆಫ್ ಈಗೆ) ಅಮ್ಮನ ಹತ್ತಿರ ಎಷ್ಟು ಬೇಕಾದರೂ ಮಾತಾಡಬಹುದು. ಮಗಳೇ ಫೋನ್ ಇಡು ನನಗೆ ಕೆಲಸ ಇದೆ ಎನ್ನುವ ತನಕ!!
ಸೊ ಅಮ್ಮನ ಹತ್ತಿರ ಮಾತಾಡುತ್ತಿದ್ದೆ. ಟಪ ಟಪತಪ್ ಶಬ್ದ. ಹೊರಗೆ ನೋಡಿದರೆ ಮಳೆ ಬರುತ್ತಾ ಇದೆ. ಓಡಿದೆ. ಟೆರೇಸಿಗೆ. ನನಗು ಒಡಲು ಬರುತ್ತಾ ಎಂದು ಕೇಳಬೇಡಿ. ಅನಿವಾರ್ಯವಾಗಿತ್ತು. ಒಣಗಿಸಿರುವ ಬಟ್ಟೆಯೆಲ್ಲ ಸ್ವಲ್ಪ ಒದ್ದೆ. ಅವೆಲ್ಲ ತಂದು ಕೆಳಗೆ ನ್ಯಾಲೆಗೆ ಒಣಸಿ ಹೊರ ಬಂದರೆ ಬಿಸಿಲು ಬರುತ್ತಿದೆ. %$%^$ ನನ್ನನ್ನು ಸುಮ್ಮನೆ ಓಡಿಸಿದೆಯಾ ಮಳ್ಳುಮಳೆಯೇ ಎಂದುಕೊಂಡೆ. ಅರರೆ ಮತ್ತೆ ಮಳೆಯು ಇದೆ. ಬಿಸಿಲು ಮಳೆ ಎರಡೂ. "ಬಿಸಿಲು ಮಳೆ ಮಂಗನ ಮದುವೆ. ಕಾಗೆ ದಿಬ್ಬಣ" ಮುಂದೆ ಕೇಳಿ. "ಚೋರಟೆ ಚಕ್ಕಲಿ ನಂಜುಳೆ ಪಾಯಸ ಕಪ್ಪೆ ವಾದ್ಯ" ಕೇಳಿದ್ದಿರ. ಬಾಲ್ಯದ ನೆನಪುಗಳೊಂದಿಗೆ ನೋಡುತ್ತ ನಿಂತೆ. ಒಂದು ನಾಯಿ ಓಡುತ್ತ ಬಂತು ಎಲ್ಲೂ ಜಾಗ ಕಾಣುತ್ತಿಲ್ಲ ವಾಪಸ್ ಓದುತ್ತಾ ಹೋಯಿತು. ಒಂದು ಅಮ್ಮ, ಪುಟ್ಟ ಅಮ್ಮ ೧೬-೧೮ ರ ಹುಡುಗಿ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದಳು. ಮಗುವಿನ ತಲೆಯನ್ನ ತನ್ನ ದುಪಟ್ಟದಿಂದ ಪೂರ್ತಿ ಮುಚ್ಚಿ ಆದಷ್ಟು ಬೇಗ ಮನೆ ಸೇರಲು ಪ್ರಯತ್ನ ನಡೆಸಿದ್ದಳು. ಮಳೆ ತನ್ನ ಅಬ್ಬರ ಹೆಚ್ಚು ಮಾಡುತ್ತಲೇ ಇತ್ತು. ಕ್ರಿಕೆಟ್ ಆಡಲು ಹೋದ ಮಗ ಎಲ್ಲಿ ನಿಮ್ತಿದ್ದನೋ ಎಂದು ನನ್ನ ಚಿಂತೆ. ಆಮೇಲೆ ಗೊತ್ತಾಯಿತು ಅವರು ಮಳೆಯಲ್ಲೂ ಆಡುತ್ತಿದ್ದರಂತೆ. He is past the age where I should wrap him with my ದುಪಟ್ಟ.
೧೦ ನಿಮಿಶಕ್ಕೆಲ್ಲ ಮಳೆ ನಿಂತಿತು. (ಇನ್ನೇನು ಇಡಿ ದಿನ ಮಳೆ ಬರಲು ಇದೇನು ನಮ್ಮ ಮಲೆನಾದೆನು ? ಹೇಳಿ ಕೇಳಿ ಬೆಂಗಳೂರು. ) ಗಿಡ ಮರಗಳೆಲ್ಲ ತೊಳೆದು ಶುಬ್ರವಾದವು.
ಮುಂದಿನ ಬ್ಲಾಗ್ ಬೇಸಿಗೆಯ ಒಂದು ದಿನ. ನಿನ್ನೆ ಮಳೆಗಾಲವಾದರೆ ಇವತ್ತು ಬೇಸಿಗೆ ಹೇಗೆ ಸಾಧ್ಯ ಎಂದು ಪಾನ್ಚವಿ ಪಾಸ್ ಪ್ರಶ್ನೆ ಮಾಡಬೇಡಿ. ಇದು ಬೆಂಗಳೂರು. ಇಲ್ಲಿ ಹಾಗೇ!
ಬೇಡವಾ? ಬೇಸಿಗೆಯ ಅಟ್ಟಹಾಸದಿಂದ ಹೈರಾಣಾಗಿದ್ದೀರಾ. ಹಾಗಾದರೆ ಚಳಿಗಾಲದ ಒಂದು ದಿನ?
one more note here - I told too soon. This kannada font provided by blogger is not so user friendly. Now I am switching back to Baraha Direct.
Does anybody know how to use kannada fonts in Linux?

No comments: